Banashankari Temple cover image

ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು

ಶ್ರೀ ಎಸ್ ಕಾರಿಯಪ್ಪ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನವು ರಾಜ್ಯದ ಅನೇಕ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಸುಮಾರು 106 ವರ್ಷಗಳ ಹಿಂದೆ ಸ್ಥಾಪಿಸಲಾಯಿತು ಮತ್ತು 20 ನೇ ಶತಮಾನದ ದೇವಾಲಯವಾಗಿದೆ. ಶ್ರೀ ಬನಶಂಕರಿಯೇ ಮೂಲ ದೇವತೆ. ಇದು ಮನುಷ್ಯರಿಂದ ನಿರ್ಮಾಣವಾಗಿದೆ. ಆದರೂ ಆಂಜನೇಯ ಸ್ವಾಮಿಯನ್ನು ಸ್ವಯಂಭೂ ಎಂದು ಹೇಳಲಾಗುತ್ತದೆ.

ಈ ದೇವಾಲಯದಿಂದಾಗಿ ಈ ಪ್ರದೇಶವನ್ನು ಬನಶಂಕರಿ ಎಂದು ಕರೆಯುತ್ತಾರೆ. 2010 ರಲ್ಲಿ ಸರ್ಕಾರವು ಈ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದೆ ಮತ್ತು ಧಾರ್ಮಿಕ ದತ್ತಿ ಇಲಾಖೆಯು ದೇವಾಲಯವನ್ನು ನವೀಕರಿಸಿದೆ. ಇತಿಹಾಸವನ್ನು ಉಲ್ಲೇಕಿಸುವಂತಹ ಯಾವುದೇ ಶಾಸನಗಳಾಗಲಿ ಮತ್ತು ಪುರಾವೆಗಳಾಗಲಿ ಇರುವುದಿಲ್ಲ. ಸ್ತಂಭಗಳ ಮೇಲಿನ ಶಿಲ್ಪಗಳು ಶಿವ ಪರಿವಾರಕ್ಕೆ ಸಂಬಂಧಿಸಿವೆ. ಕಾರಿಡಾರ್‌ನಲ್ಲಿ ಬಾವಿಯಿದ್ದು, ಈ ಬಾವಿಯ ನೀರನ್ನು ಬಳಸಿ ಶ್ರೀ ಬನಶಂಕರಿ ದೇವಿಗೆ ನಿತ್ಯವೂ ಅಭಿಷೇಕ ಮಾಡಲಾಗುತ್ತದೆ.ಯಾವ ಸಮಯದಲ್ಲೂ ಈ ಬಾವಿಯ ನೀರು ಬತ್ತಿರುವುದಿಲ್ಲ.

ದೇವಸ್ಥಾನದ ಮೂಲ ದೇವತೆ ಬಾದಾಮಿಯ ಬನಶಂಕರಿಯಾಗಿದ್ದು, ಪರೋಪಕಾರಿ ಗಾಣಿಗ ಶೆಟ್ಟಿ ಅವರ ವಂಶಕ್ಕೆ ಸೇರಿದ ಬಸಪ್ಪ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದರು. ದೇವಿಯು ಅವನ ಕನಸಿನಲ್ಲಿ ಕಾಣಿಸಿಕೊಂಡು ದೇವಿ ವಿಗ್ರಹವನ್ನು ತಂದು ಪ್ರತಿಷ್ಠಾಪಿಸುವಂತೆ ಆದೇಶಿಸಿ, ಅದರಂತೆ ವಿಗ್ರಹವನ್ನು ತಂದು ಇಲ್ಲಿ ಸ್ಥಾಪಿಸಲಾಯಿತು. ಮುಂದಿನ ಪೀಳಿಗೆಯ ಸದಸ್ಯರುಗಳಾದ ಸೋಮಣ್ಣ ಶೆಟ್ಟಿ ಮತ್ತು ಇತರರು 21 ಮೇ, 1915 ರಂದು ದೇವಾಲಯವನ್ನು ಸ್ಥಾಪಿಸಿದರು ಮತ್ತು ಶಕ್ತಿ ಸ್ವರೂಪಿಣಿ ಮತ್ತು ಸಿಂಹ ವಾಹಿನಿಯು ಮುಖ್ಯ ವಿಗ್ರಹವಾಗಿದೆ.

ಭಾನುವಾರ, ಮಂಗಳವಾರ ಮತ್ತು ಶುಕ್ರವಾರದಂದು ನಿಂಬೆ ಸಿಪ್ಪೆಯ ದೀಪವನ್ನು ಅರ್ಪಿಸುವ ರಾಹುಕಾಲ ಪೂಜೆಯು ಇಲ್ಲಿನ ವಿಶೇಷವಾಗಿದೆ. ಸಂತಾನಹೀನತೆ ಮತ್ತು ಜಾತಕ ದೋಷದ ಸಮಸ್ಯೆಗಳು ನಿವಾರಣೆಯಾಗುತ್ತವೆ. ದೇವಿಯ ಆರಾಧನೆಯಿಂದ ಭಕ್ತರ ಅನೇಕ ಇಷ್ಟಾರ್ಥಗಳು ಈಡೇರುತ್ತವೆ. ಭಾದ್ರಪದ ಹುಣ್ಣಿಮೆಯಂದು ದೇವಿಯ ಜನ್ಮದಿನವನ್ನು ಆಚರಿಸಲಾಗುತ್ತದೆ. ವಿವಿಧ ಅಲಂಕಾರಗಳು, ಹೋಮ ಮತ್ತು ಹವನಗಳು ನವರಾತ್ರಿಯ ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ.

ಗ್ಯಾಲರಿ

img
img
img
img
img
img
img
img
img
img
img
img